ಅಳುವ ಕಂಗಳು
ಬರೀ ಬತ್ತಿದ ಕಣ್ಣೀರು
ಬರಿದಾದ ಕನಸ ಹಸಿ ಚಿತ್ರ
ಅರ್ಥವಾಗದೇ ಹೋಗುವ ಒಂದು ನೋಟ
ಹಸಿ ಮನಸು...
ಕಾಯುವುದು, ಹಿಡಿ ಪ್ರೀತಿಗೆ,
ಮರೀಚಿಕೆ; ಬದುಕ ಕೊನೆಯಿಲ್ಲದ ಹಾದಿಯಲಿ
ಎಲ್ಲಿ ನಿಲ್ಲುವುದೊ
ಕೊನೆ ಮೊದಲಿಲ್ಲದ ಬೆನ್ನಟ್ಟಿದ ಪಯಣ;
ನಿಶಬ್ದ ಕೂಗು ಎದೆಯೊಳಗೆ
'ಮನಸ ಮನೆ' ಸಿಡಿಯುವಂತೆ
ಕಾಡಿದೆ ಒಳಗೊಳಗೆ
ಹೊರಗೆ ನೋಡು ಶಾಂತ ನಿಲುವು
ನಗುವೆಲ್ಲೋ ಅಳುವೆಲ್ಲೋ
ನಿಲ್ಲದ ಬದುಕಲಿ
ನಾಳೆ ನಿನ್ನೆಯ ಹಂಗಿಲ್ಲ
ಮಧುರ ಗಳಿಗೆಗಳ ನೆನಪಿಸಲೊಲ್ಲ
ಖಾಲಿ ಮೌನ
ಅಳ ಹೊರಟ ಕಣ್ಣು
ಬತ್ತಿದ ಕಣ್ಣೇರು
ಮಡುಗಟ್ಟಿದ ಬದುಕು
ನಿಂತ ನಿರಂತರತೆಯ ವಾಸ್ತವ
ಅಳದ ಕಂಗಳು, ನಿಶಬ್ದ ನೋಟ ದಿಗಂತದೆಡೆಗೆ
No comments:
Post a Comment