Friday, 26 February 2016

ಮತ್ತೆ ಆ ಹಾದಿಯ ಪಯಣ

1.

ಪಯಣ ಈಗಸ್ಟೇ ಶುರು, ನೀ ತಿರುಗಿ ನೋಡದಿರು...
ಬಿಕ್ಕುತಿದೆ ಮನ

ನಾನು ನಾನಲ್ಲ
ಅನ್ನಿಸಿದ ಕ್ಷಣವೇ ಸೋತೆ..!!!
ಏನೂ ಆಗಿಲ್ಲವೆಂಬ ಮೌನ, ಆಜ್ಞೆ ಮೀರಿ
ಕರಗುವಂತೆ ಬಿಕ್ಕಿತು ಹಾದಿಯಲಿ

ನೀ ಅರಿಯದಷ್ಟು ಆಳವಿದೆ ಮೌನ
ಸಾಗುತಿರು, ಕರಗಲು ಬಿಡು ನನ್ನ
ನಿನ್ನ ನಗುವಷ್ಟೆ ಪ್ರೀತಿ ನನಗೆ...

2.
ನಕ್ಕಿದ್ದೆ ಒಮ್ಮೊಮ್ಮೆ,
ನಿನ್ನ ಮತ್ತು ನಿನ್ನೊಳಗಿನ ಖಾಲಿತನವ ನೆನೆದು,
ಕೊನೆಯ ಬಾರಿ ನೀ ಸಿಕ್ಕಾಗ ನನಗೆ
ಇಂಥದ್ದೇ ಖಾಲಿತನವಿತ್ತು ಮತ್ತು
ನೀ ಮೌನವಾಗಿದ್ದೆ!!! ನಿನ್ನ ಬಟ್ಟಲು ಕಂಗಳಲಿ
ಮತ್ತೆ ಭರವಸೆ ತುಂಬಿ
ಹೊಳೆಯುವಂತೆ ಮಾಡುವುದಿತ್ತು ನನಗೆ,

ನಾ ಮೌನವಾದೆ, ಮಾತು ಮರೆತೇ,
ನಿನ್ನ ಮೌನವನು ನಾ ತುಂಬಿಕೊಂಡೆ, ನೀ ನಕ್ಕೆ.

3.
ಇಂದು, ನೀ ಸಿಕ್ಕಿದೆ ಮತ್ತೆ,
ಜೊತೆಗೆ ನನ್ನೊಳಗೆ ನಿನ್ನ ಖಾಲಿತನ!!! ನಾ ನಕ್ಕೆ, ನೀ ಮೌನವಿದ್ದೆ!!!
ಹಾದಿ ದಿಗಂತವಾಗಿತ್ತು