ಒಮ್ಮೆ ನನ್ನ ಬಾಲ್ಯವಿತ್ತು;
ಯವ್ವನವಿತ್ತು;
ದಿನಗಳು ಸೇರಿ,
ಒಂದಷ್ಟು
ಮತ್ತೊಂದಷ್ಟು!
ಜವಾಬ್ದಾರಿ, ತಾಕಲಾಟದ ನಡುವೆ
ಮತ್ತೆ ದಿನಗಳು ಸಾಗಿ ಮುಪ್ಪು !?
ಏನನ್ನೋ ಮರೆತಂತೆ ನೆನಪು;
ಮರೆತೆನೇ ಪ್ರೀತಿಸುವುದನು ನನ್ನಾತ್ಮವ
ನಿನ್ನೆ - ನಾಳೆಗಳ ಧಿಮಿತದಲಿ!
ಬದುಕ ಸವಾರಿ ಬಂದಾಯ್ತು ಈ ತನಕ ...
ಆಸೆ ಪ್ರತಿಷ್ಠೆಯಲಿ ಜೀವನ ಕಳೆದಾಯ್ತು, ಇಷ್ಟು ದಿನ
ಮರೆತು ಬಿಟ್ಟೇನೇ ನನ್ನೊಳಗಿನ ನನ್ನ
ಮತ್ತೆ ಕೊಡವಿ
ಮರೆತ ಆಸೆ-ಕನಸ ಚಿಗುರಿಸಿ
ಮತ್ತೆ ಪ್ರೀತಿಸುವುದಿದೆ ಬದುಕುನು ನಿನ್ನೆಡೆಗೆ
ಯವ್ವನವಿತ್ತು;
ದಿನಗಳು ಸೇರಿ,
ಒಂದಷ್ಟು
ಮತ್ತೊಂದಷ್ಟು!
ಜವಾಬ್ದಾರಿ, ತಾಕಲಾಟದ ನಡುವೆ
ಮತ್ತೆ ದಿನಗಳು ಸಾಗಿ ಮುಪ್ಪು !?
ಏನನ್ನೋ ಮರೆತಂತೆ ನೆನಪು;
ಮರೆತೆನೇ ಪ್ರೀತಿಸುವುದನು ನನ್ನಾತ್ಮವ
ನಿನ್ನೆ - ನಾಳೆಗಳ ಧಿಮಿತದಲಿ!
ಬದುಕ ಸವಾರಿ ಬಂದಾಯ್ತು ಈ ತನಕ ...
ಆಸೆ ಪ್ರತಿಷ್ಠೆಯಲಿ ಜೀವನ ಕಳೆದಾಯ್ತು, ಇಷ್ಟು ದಿನ
ಮರೆತು ಬಿಟ್ಟೇನೇ ನನ್ನೊಳಗಿನ ನನ್ನ
ಮತ್ತೆ ಕೊಡವಿ
ಮರೆತ ಆಸೆ-ಕನಸ ಚಿಗುರಿಸಿ
ಮತ್ತೆ ಪ್ರೀತಿಸುವುದಿದೆ ಬದುಕುನು ನಿನ್ನೆಡೆಗೆ