ಕಗ್ಗತ್ತಲೆಯ ಒಂಟಿ ಕೋಣೆಯಲಿ
ಮೂಲೆಯಲಿ ಕುಳಿತು ಮೊಣಕಾಲಿಗೆ ತಲೆಯಿಟ್ಟು
ನಿನ್ನ ನೆನಪಿನಲಿ ಪರಿತಪಿಸುವುದಿತ್ತು,
ನಿನ್ನ ಗೆಳತಿಯ ನೆನಪ ನಿನ್ನ
ಕಾಡುವ ಗಳಿಗೆಯನ್ನು
ಕ್ಯಾನ್ ವಾಸ್ ನಲ್ಲಿ ಬಳಿದು, ನಿನಗೊಂದು
ಉಡುಗೊರೆ ಕೊಡುವುದಿತ್ತು, ನೀ
ಮರೆತು ಹೋದ ಹಾಡನ್ನು
ಹಾಡಿ, ಕನಸುಗಳ ಧೂಳು ಕೆಡುವುದಿತ್ತು
ಆಡಿದ್ದ ನಾಲ್ಕು ಮಾತಿಗಿಂತ,
ಆಡದೇ ಉಳಿದ ಸಾವಿರಾರು ಮಾತಿನ ಮೌನವನು
ನಿನ್ನೆದುರು ಚಿತ್ರಿಸಿ ತೋರುವ ತವಕವಿರಲಿಲ್ಲ,
ಹಾಗೇ ಕರಗಲಿ ಎಂಬ ಹಂಬಲವಿತ್ತು
ಅರ್ಥವಾಗದ ಮೌನ, ಚಿತ್ರಿಸಿ
ಹರಡಿಟ್ಟರೂ ಅರ್ಥವಾಗದೇ ಉಳಿಯುದು ಮೌನ..!!!
ಮೂಲೆಯಲಿ ಕುಳಿತು ಮೊಣಕಾಲಿಗೆ ತಲೆಯಿಟ್ಟು
ನಿನ್ನ ನೆನಪಿನಲಿ ಪರಿತಪಿಸುವುದಿತ್ತು,
ನಿನ್ನ ಗೆಳತಿಯ ನೆನಪ ನಿನ್ನ
ಕಾಡುವ ಗಳಿಗೆಯನ್ನು
ಕ್ಯಾನ್ ವಾಸ್ ನಲ್ಲಿ ಬಳಿದು, ನಿನಗೊಂದು
ಉಡುಗೊರೆ ಕೊಡುವುದಿತ್ತು, ನೀ
ಮರೆತು ಹೋದ ಹಾಡನ್ನು
ಹಾಡಿ, ಕನಸುಗಳ ಧೂಳು ಕೆಡುವುದಿತ್ತು
ಆಡಿದ್ದ ನಾಲ್ಕು ಮಾತಿಗಿಂತ,
ಆಡದೇ ಉಳಿದ ಸಾವಿರಾರು ಮಾತಿನ ಮೌನವನು
ನಿನ್ನೆದುರು ಚಿತ್ರಿಸಿ ತೋರುವ ತವಕವಿರಲಿಲ್ಲ,
ಹಾಗೇ ಕರಗಲಿ ಎಂಬ ಹಂಬಲವಿತ್ತು
ಅರ್ಥವಾಗದ ಮೌನ, ಚಿತ್ರಿಸಿ
ಹರಡಿಟ್ಟರೂ ಅರ್ಥವಾಗದೇ ಉಳಿಯುದು ಮೌನ..!!!