ಮಳೆ ತೊಯ್ಯಲೆಂದೇ
ಬಂದಿದೆಯೇನೋ ಅನ್ನಿಸುತ್ತಿದೆ,
ಸುರಿದ ಮಳೆ ನೀರಿನಲಿ,
ತೇಲಿ ಬಿಡಲಿದ್ದೇನೆ, ನಿನ್ನ ನೆನಪುಗಳ ದೋಣಿಯಂತೆ
ಕಾದಿರು ಮುಂದೆ, ಎತ್ತಿಡು ಬೇಕೆನಿಸಿದಲ್ಲಿ
ಮತ್ತೆ ಖಾಲಿಯಾಗಿದ್ದೇನೆ ನೋಡು,
ಎದೆಯಲಿ ಭಾವನೆಗಳೇ ಇಲ್ಲದಂತೆ
ಎಸೆಯಬಾರದು ನೆನಪುಗಳ ಎಲ್ಲೆಂದರಲ್ಲಿ
ಮಾತಿಗಿರಲಿಲ್ಲ ನೀನು
ಅಖಂಡ ತೀರದಲಿ ನೋಯಿಸಿರಲ್ಲಿ ಒಂಟಿತನ
ಎಲ್ಲೋ ಕಳೆದು ಹೋಗಿದ್ದ ನನ್ನ ಕ್ಷಣಗಳು
ಬರತೊಡಗಿದವು ನನ್ನೆಡೆಗೆ
ನನ್ನೊಳಗೆ ಹೆಚ್ಚಿದ ಒತ್ತಡಗಳು
ತಡೆಯುತ್ತಿರಲಿಲ್ಲ ನನ್ನನ್ನು
ಒಳಗೊಳಗೇ ಕುದಿಯುವ ಈ ಬಡಿತ ಬೇಡವಿತ್ತು ನನಗೆ
ನೀ ಬರುವ ಹಾದಿಯಲಿ
ಕುಳಿತರಲಿಲ್ಲ ನಾ ಕಾಯುತ್ತ
ಬದುಕು ನಿಂತಲ್ಲಿ ನಿಲ್ಲುವುದಿಲ್ಲ ತಾನೇ
ಹಾಗೆ ಬದುಕನ್ನ ನಿಲ್ಲಿಸಲೂಬಾರದು
ಹೆಜ್ಜೆ ಗುರುತುಗಳಿವೆ ನೆಡೆದು ಬಂದ ಹಾದಿಯುದ್ದಕ್ಕೂ
ನೆನಪುಗಳು ಮಾತ್ರ ನೋಡುತ್ತಿವೆ ಅನಾಥವಾಗಿ
No comments:
Post a Comment