ಹೆಕ್ಕಿ ತೆಗೆಯುವುದಿದೆ ಕವಿತೆಗಳ;
ಸಾಗಿ ಬಂದ ಹಾದಿಯ ನೆನಪಿಂದ
ಕಾಣ್ತುಂಬಿ ನಿಂತ ಕಂಗಳಿಂದ
ಎದೆಯಾಳದ ಯಾತನೆಯ ಮಡಿಲಿಂದ
ತುಟಿಬಿಚ್ಚಿ ನಕ್ಕ ನಗುವಿನ ಕೊನೆಯಿಂದ
ಮತ್ತೆ, ಹೆಕ್ಕಿ ತೆಗೆಯುವುದಿದೆ ಕವಿತೆಗಳ;
ಪುಸ್ತಕದ ಕೊನೆಯ ಪುಟದಿಂದ
ಬರೆಯದೆ ಉಳಿದ ಸಾಲುಗಳಿಂದ
ಎದೆಯಲ್ಲೇ ಕರಗಿದ ಕತೆಯಿಂದ
ಮೌನದ ತುದಿಯ ಭಾವನೆಗಳಿಂದ
ಗೆಳೆಯ ಮತ್ತೆ ನಿನ್ನ ಪ್ರೀತಿಯ ನಶೆಯಿಂದ
ಹೆಕ್ಕಿ ತೆಗೆಯುವುದಿದೆ ಕವಿತೆಗಳ ಮತ್ತೆ,
ಕಾಡುವ ನೆನಪಿನ ನಿಟ್ಟುಸಿರಿಂದ
ಸೋಲೊಪ್ಪದ ಕನಸಿಂದ
ಹುಚ್ಚು ಮನಸಿನ ಕೆಚ್ಚೆದೆಯಿಂದ
ಕಡಲಂಚಿನ ನೆನಪಿನಲೆಯಿಂದ
ಮತ್ತೆ,
ಹೆಕ್ಕಿ ತೆಗೆಯುವುದಿದೆ ಕವಿತೆಗಳ
ಮರೆತು ಬದುಕಿದ ಬದುಕಿಂದ
No comments:
Post a Comment