Wednesday, 3 September 2014

ಮುನಿಸಿಕೊಂಡ ಕವಿತೆ

ನನ್ನವೇ ಕ್ಷಣಗಳಲ್ಲಿ ನಕ್ಕು, ಅತ್ತು,
ಮಾತಿಗಿಳಿವ ಮುನ್ನವೇ,
ಮುನಿಸಿಕೊಂಡಿತು ಕವಿತೆ ನನ್ನ ಜೊತೆ..!!!

ಭಾವನೆಗಳ ತಾಕಲಾಟದಲಿ,
ಮೌನದ ಗುಂಗಿನಲಿ, ನೋವಿನ ಎಳೆ-ಎಳೆಯನ್ನೂ
ತನ್ನೊಳಗೆ ಕರಗಿಸಿಕೊಂಡಿದ್ದ ಕವಿತೆಗೆ
ಮುನಿಸು ನನ್ನಲ್ಲಿ

ಬರಲಾರೆನೆಂದು ಹಟಕ್ಕೆ ಬಿದ್ದ ಮಗುವಿನಂತೆ
ದೂರ ನಿಂತು ಕಾಡುತಿತ್ತು, ನಾ
ಭಾವನೆಗಳ ಭಾರವನು ಹೊರಲಾರದೆ
ಒಳಗೊಳಗೇ ಬೆಂದು ಕರಗುತಿದ್ದೆ ಕ್ಷಣ-ಕ್ಷಣ

ಕವಿತೆಯ ಮೌನ ಮುರಿಯಲು
ಕಾದ ಪ್ರತಿ ಗಳಿಗೆಯೂ ಸೋತಿದ್ದೆ ನಾನು
ಹಟಕ್ಕೆ ಕುಳಿತಂತೆ ಕಾಡಿತ್ತು ಮನ,

ಮುನಿಸಿಕೊಂಡಿದೆ ಕವಿತೆ ನನ್ನಲ್ಲಿ

3 comments:

  1. ನಿಮ್ಮ ಜೊತೆ ಮುನಿಸಿಕೊಂಡ ಕವಿತೆ, ನಮ್ಮೊಂದಿಗೆ ನಗುತ್ತಿದೆ,,,,,, ನಿಮ್ಮದೇ ಕೈಗಳಲ್ಲಿ ಅರಳಿ,,,,, ಸುಂದರ ಬರಹ

    ReplyDelete
    Replies
    1. ಧನ್ಯವಾದಗಳು:)

      Delete
    2. This comment has been removed by the author.

      Delete